Indian bank Requerment: ಇಂಡಿಯನ್ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ನೇಮಕಾತಿ! ದೇಶದಾದ್ಯಂತ 1500 ಹುದ್ದೆಗಳ ಭರ್ತಿ
ಇಂಡಿಯನ್ ಬ್ಯಾಂಕ್, ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, 2025ನೇ ಸಾಲಿನಲ್ಲಿ ಅಪ್ರೆಂಟಿಸ್ (Apprentice) ಹುದ್ದೆಗಳಿಗಾಗಿ ಹೊಸ ನೇಮಕಾತಿ ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 1500 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ವಿವಿಧ ರಾಜ್ಯಗಳಲ್ಲಿ ಹುದ್ದೆಗಳು ಲಭ್ಯವಿದ್ದು, ಕರ್ನಾಟಕದಲ್ಲಿ ಮಾತ್ರ 42 ಹುದ್ದೆಗಳು ಖಾಲಿಯಿವೆ.
ವಿವರ | ಮಾಹಿತಿ |
ಸಂಸ್ಥೆ ಹೆಸರು | ಇಂಡಿಯನ್ ಬ್ಯಾಂಕ್ (Indian Bank) |
ಹುದ್ದೆಯ ಹೆಸರು | ಅಪ್ರೆಂಟಿಸ್ (Apprentice) |
ಒಟ್ಟು ಹುದ್ದೆಗಳ ಸಂಖ್ಯೆ | 1500 (ಕರ್ನಾಟಕ: 42) |
ಅರ್ಜಿ ವಿಧಾನ | ಆನ್‌ಲೈನ್ |
ಉದ್ಯೋಗ ಸ್ಥಳ | ಭಾರತಾದ್ಯಂತ |
ಅರ್ಜಿ ಪ್ರಾರಂಭ ದಿನಾಂಕ | 18 ಜುಲೈ 2025 |
ಅರ್ಜಿ ಕೊನೆಯ ದಿನಾಂಕ | 07 ಆಗಸ್ಟ್ 2025 |
ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಪದವಿ ಪೂರೈಸಿರಬೇಕು.
- ಪದವಿ ಅರ್ಹತೆ 01 ಜುಲೈ 2025ರೊಳಗೆ ಪೂರ್ಣಗೊಂಡಿರಬೇಕು.
ಭಾಷಾ ಅರ್ಹತೆ
- ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
- 10ನೇ ತರಗತಿ ಅಥವಾ ಆಧಿಕೃತ ಪ್ರಮಾಣಪತ್ರಗಳಲ್ಲಿ ಸ್ಥಳೀಯ ಭಾಷೆ ವ್ಯಾಸಂಗದ ಪುರಾವೆ ಬೇಕು.
ವಯೋಮಿತಿ
- ಕನಿಷ್ಠ: 20 ವರ್ಷ
- ಗರಿಷ್ಠ: 28 ವರ್ಷ
- ಅಂದರೆ ಅಭ್ಯರ್ಥಿಯ ಜನನ ದಿನಾಂಕ 01 ಜುಲೈ 1997 ರಿಂದ 01 ಜುಲೈ 2005 ನಡುವೆ ಇರಬೇಕು.
ವಯೋಮಿತಿಗೆ ಸಡಿಲಿಕೆ
- ಎಸ್ಸಿ/ಎಸ್ಟಿ: 5 ವರ್ಷಗಳು
- ಒಬಿಸಿ: 3 ವರ್ಷಗಳು
- ಅಂಗವಿಕಲ ಅಭ್ಯರ್ಥಿಗಳು: 10 ರಿಂದ 15 ವರ್ಷಗಳು
- ಮಾಜಿ ಸೈನಿಕರಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ.
ಶಿಷ್ಯ ವೇತನ (Stipend)
ಪ್ರದೇಶ | ತಿಂಗಳಿಗೆ ವೇತನ |
ಮೆಟ್ರೋ ನಗರಗಳು | ₹15,000 |
ಬೃಹತ್ ನಗರಗಳು | ₹12,000 |
ಗ್ರಾಮೀಣ ಪ್ರದೇಶಗಳು | ₹10,000 |
ಗಮನಿಸಿ: ಈ ಶಿಷ್ಯ ವೇತನ ಕೇವಲ ತರಬೇತಿ ಅವಧಿಗೆ ಮಾತ್ರ; ಇತರ ಲಾಭಗಳು ಅನ್ವಯವಾಗುವುದಿಲ್ಲ.
ಇದನ್ನು ಓದಿ : New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಜಿಲ್ಲಾವಾರು ಅರ್ಜಿದಾರರ ಮಾಹಿತಿ
ಅರ್ಜಿ ಶುಲ್ಕ
ವರ್ಗ | ಶುಲ್ಕ |
ಎಸ್ಸಿ/ಎಸ್ಟಿ/ಪಿಡಬ್ಲ್ಯುಡಿಯಲ್ಲಿ: | ₹175 (ಮಾಹಿತಿ ಶುಲ್ಕ ಮಾತ್ರ) |
ಜನರಲ್/ಒಬಿಸಿ/ಇಡಬ್ಲ್ಯೂಎಸ್: | ₹800 (ಅರ್ಜಿ + ಮಾಹಿತಿ ಶುಲ್ಕ) |
ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಪಾವತಿ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ನಾಲ್ಕು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
- ಆನ್‌ಲೈನ್ ಪರೀಕ್ಷೆ (ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್, ಬ್ಯಾಂಕಿಂಗ್ ಜ್ಞಾನ)
- ಸ್ಥಳೀಯ ಭಾಷಾ ಪರೀಕ್ಷೆ (ಉದಾ: ಕರ್ನಾಟಕಕ್ಕೆ – ಕನ್ನಡ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಎಲ್ಲಾ ಹಂತಗಳಲ್ಲಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳು ಶಿಷ್ಯತ್ವಕ್ಕೆ ಆಯ್ಕೆಯಾಗಲಿದ್ದಾರೆ.
ಅರ್ಜಿ ಸಲ್ಲಿಸಲು ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಇಂಡಿಯನ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳನ್ನು ಗುರಿಯಾಗಿಟ್ಟುಕೊಂಡಿರುವ ಯುವಕರಿಗೆ ಇದು ಉತ್ತಮ ಆರಂಭಿಕ ಅವಕಾಶ. ಅರ್ಹರು ಆಗದೆ ಹೋಗುವ ಮುನ್ನವೇ ಅರ್ಜಿ ಸಲ್ಲಿಸಿ, ಆನ್‌ಲೈನ್ ಪರೀಕ್ಷೆಗೆ ತಯಾರಿ ಆರಂಭಿಸಿ.