Innovation Scheme: ಆವಿಷ್ಕಾರ ಯೋಜನೆ ಗ್ರಾಮೀಣ ಆವಿಷ್ಕಾರಗಳಿಗೆ ₹4 ಲಕ್ಷದ ನೆರವು!
ಗ್ರಾಮೀಣ ಸಮಸ್ಯೆಗಳಿಗೆ ನವೀನ ಪರಿಹಾರಗಳ ಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರವು “ತಳಹಂತದ ಆವಿಷ್ಕಾರ ಯೋಜನೆ – 2025” ಅನ್ನು ಮತ್ತೆ ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ನಾವೀನ್ಯಕರಿಗೆ ಪ್ರೋತ್ಸಾಹ ನೀಡುವ ಗುರಿಯಿದೆ. ಆಯ್ಕೆಯಾದ ಅರ್ಹರಿಗೆ ₹4 ಲಕ್ಷದವರೆಗೆ ಹಣಕಾಸು ನೆರವು ಲಭ್ಯ.
ಯೋಜನೆಯ ಉದ್ದೇಶ ಏನು?
ಈ ಯೋಜನೆಯ ಪ್ರಧಾನ ಉದ್ದೇಶವೆಂದರೆ ಗ್ರಾಮೀಣ ಜೀವನದ ಸವಾಲುಗಳಿಗೆ ಸರಳ, ಪರಿಣಾಮಕಾರಿ ಹಾಗೂ ತಂತ್ರಜ್ಞಾನಾಧಾರಿತ ಪರಿಹಾರಗಳನ್ನು ನೀಡುವ ನವೀನ ಆಲೋಚನೆಗಳಿಗೆ ಬೆಂಬಲ ನೀಡುವುದು. ಸ್ಥಳೀಯ ಸಮಸ್ಯೆಗಳಿಗೆ ಜನರು ತಾವೇ ಪರಿಹಾರ ಕಂಡುಹಿಡಿಯಬೇಕೆಂಬ ಚಿಂತನೆ ಈ ಯೋಜನೆಯ ಹಿನ್ನಲೆ.
ಯಾರು ಅರ್ಜಿ ಸಲ್ಲಿಸಬಹುದು? (ಅರ್ಹತಾ ಮಾನದಂಡಗಳು)
ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರಬೇಕು:
- ಭಾರತಿಯ ನಾಗರಿಕರಾಗಿರಬೇಕು
- ಕರ್ನಾಟಕದ ನಿವಾಸಿಯಾಗಿರಬೇಕು
- ನಿಮ್ಮ ಆವಿಷ್ಕಾರ ಇನ್ನಾವುದೇ ಸರ್ಕಾರಿ ಯೋಜನೆಗೆ ಸೇರಿರಬಾರದು
- ಈ ಹಿಂದೆ ಸರ್ಕಾರದಿಂದ ಹಣಕಾಸು ನೆರವು ಪಡೆದಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು
- ಮಾನ್ಯ ಗುರುತಿನ ಚೀಟಿಗಳೊಂದಿಗೆ ವೃತ್ತಿಪರ ಗುರುತಿನ ದಾಖಲೆಗಳನ್ನು ಹೊಂದಿರಬೇಕು
- ಆಯ್ಕೆಯಾದ ನಂತರ ಕಂಪನಿ ಸ್ಥಾಪಿಸಲು ಸಿದ್ಧತೆ ಇರಬೇಕು
ಅಗತ್ಯ ದಾಖಲೆಗಳ ಪಟ್ಟಿಯು ಹೀಗಿದೆ
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಪಾಸ್ ಬುಕ್ (ಫೋಟೋ ಅಥವಾ ಸ್ಕ್ಯಾನ್ ಪ್ರತಿಯೊಂದಿಗೆ)
- ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ
- ನವೀನ ಆವಿಷ್ಕಾರದ ಫೋಟೋ ಅಥವಾ ವಿಡಿಯೋ
- ಸಕ್ರಿಯ ಮೊಬೈಲ್ ಸಂಖ್ಯೆ
ಅರ್ಹತೆಯನ್ನು ಪೂರೈಸಿದ ಮತ್ತು ಆಯ್ಕೆಯಾದ ನಾವೀನ್ಯಕರಿಗೆ ಗರಿಷ್ಠ ₹4 ಲಕ್ಷದವರೆಗೆ ಅನುದಾನ ದೊರೆಯಲಿದೆ. ಈ ಅನುದಾನವನ್ನು ಆವಿಷ್ಕಾರ ಅಭಿವೃದ್ಧಿಗೆ ಹಾಗೂ ಅದರ ಅಳವಡಿಕೆಗೆ ಬಳಸಬಹುದು.
ಇದನ್ನು ಓದಿ : PM Kisan Update: ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣದ ಬಗ್ಗೆ ಮುಖ್ಯವಾದ ಮಾಹಿತಿ! ಈ ಕೆಲಸ ಮಾಡಿದರೆ ಮಾತ್ರ ಹಣ!
ಅರ್ಜಿ ಸಲ್ಲಿಸುವ ವಿಧಾನ: (ಹಂತ ಹಂತವಾಗಿ)
- ಅಧಿಕೃತ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ [Apply Now]
- ಅರ್ಜಿ ಫಾರ್ಮ್‌ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಪೂರೈಸಿ
- ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ನಿಮ್ಮ ನವೀನ ಆವಿಷ್ಕಾರದ ಚಿತ್ರ ಅಥವಾ ವಿಡಿಯೋವನ್ನು ಜೊತೆಗೆ ಅಪ್ಲೋಡ್ ಮಾಡಿ
- ಕೊನೆಗೆ “Submit” ಬಟನ್ ಒತ್ತಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
📅 14 ಆಗಸ್ಟ್ 2025
- ದೂರವಾಣಿ: 080-22231006
- ಇಮೇಲ್: kits@gmail.com