Yasashwini Yojana : ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರ ಆರೋಗ್ಯ ಭದ್ರತೆಯನ್ನು ಮಾಡಿಸುವ ಸಲುವಾಗಿ ಈಗ ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಲು ಸರ್ಕಾರವು ಈಗ ಡಿಸೆಂಬರ್ 31.2024ರ ವರೆಗೆ ಕೊನೆಯ ದಿನಾಂಕ ಎಂದು ಈಗ ದಿನಾಂಕವನ್ನು ಪ್ರಕಟನೆ ಮಾಡಿದೆ. ಆದ ಕಾರಣ ಈಗ ನೀವು ಕೂಡ ಈ ಕೂಡಲೇ ಹೋಗಿ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗಿದ್ದರೆ ಈ ಒಂದು ಯೋಜನೆಗೆ ಯಾವ ಯಾವ ರೀತಿಯ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಅರ್ಹತೆಗಳು ಏನು ?
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಕಾರ್ಯದಲ್ಲಿ ಇರುವಂತಹ ಸರ್ಕಾರ ಸಂಘಗಳ ಸದಸ್ಯರು ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಅದೇ ರೀತಿಯಾಗಿ ಸ್ಥಗಿತದಲ್ಲಿರುವಂತಹ ಸಹಕಾರ ಸಂಘದ ಸದಸ್ಯರು ಹಾಗೂ ನೌಕರರ ಸಂಘದ ಸದಸ್ಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರಿರುವುದಿಲ್ಲ.
- ಆನಂತರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷವನ್ನು ದಾಟಿರಬೇಕಾಗುತ್ತದೆ.
ಈ ಯೋಜನೆಯ ಮಿತಿಗಳು ಏನು ?
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಸದಸ್ಯರು ಸರಕಾರಿ ನೌಕರರನ್ನು ಹೊಂದಿದ್ದರೆ ಈ ಒಂದು ಸೌಲಭ್ಯ ಅವರಿಗೆ ದೊರೆಯುವುದಿಲ್ಲ.
- ಅದೇ ರೀತಿಯಾಗಿ ಅವರು ಬೇರೆ ಆರೋಗ್ಯ ಯೋಜನೆ ಅಡಿಯಲ್ಲಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಒಂದು ಯೋಜನೆ ಅಡಿಯಲ್ಲಿ ನೋಂದಾಯಿಸಲು ಸಾಧ್ಯವಿಲ್ಲ.
ಅರ್ಜಿ ಶುಲ್ಕ ಏನು ?
- ಅರ್ಜಿಯನ್ನು ಸಲ್ಲಿಸುವ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ : 500
- ಅರ್ಜಿಯನ್ನು ಸಲ್ಲಿಸುವಂತಹ ಕುಟುಂಬದಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿಗೆ ಸದಸ್ಯರು ಇದ್ದರೆ ನೂರು ರೂಪಾಯಿ ಹೆಚ್ಚುವರಿ ಯಾಗುತ್ತದೆ.
ಈ ಯೋಜನೆಯ ಲಾಭಗಳು ಏನು ?
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವುದರಿಂದ ನೀವು ಆರ್ಥಿಕವಾಗಿ ಹಿಂದೆ ಬಿದ್ದ ಕುಟುಂಬಗಳಿಗೆ 2,128 ವಿವಿಧ ಚಿಕಿತ್ಸೆಗಳ ನಗದು ರಹಿತ ಸೌಲಭ್ಯವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ನೀವು ಈ ಒಂದು ಯಶಸ್ವಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ. ಆದರೆ 478 ಐಸಿಯು ಚಿಕಿತ್ಸೆಗಳನ್ನು ಕೂಡ ಪಡೆದುಕೊಳ್ಳಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ಸಹಕಾರ ಸಂಘಗಳಿಗೆ ಭೇಟಿಯನ್ನು ನೀಡಿ. ಅವರಿಗೆ ಯಶಸ್ವಿನಿ ಯೋಜನೆಗೆ ನೋಂದಾವಣೆ ಮಾಡಿಕೊಳ್ಳಲು ಅವರಿಗೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.