PM Ujjawal Yojana: ಮಹಿಳೆಯರಿಗೆ ಉಚಿತ ಗ್ಯಾಸ್ ಪಡೆಯಲು ಅವಕಾಶ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಕೇಂದ್ರ ಸರ್ಕಾರವು ನೀಡಿರುವಂತಹ ಈ ಒಂದು ಯೋಜನೆ ಮೂಲಕ ಈಗ ಮಹಿಳೆಯರಿಗೆ ಉಚಿತವಾಗಿ ಮತ್ತೊಮ್ಮೆ ಗ್ಯಾಸ್ ಸಿಲೆಂಡರ್ ಪಡೆಯಲು ಅವಕಾಶವನ್ನು ನೀಡಲಾಗಿದೆ. ಈಗ ನೀವು ಕೂಡ ಈ ಒಂದು ಉಚಿತ ಗ್ಯಾಸ್ ಅನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಮತ್ತು ಪಡೆಯಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿಯಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ನಮ್ಮ ದೇಶದ ಪ್ರಧಾನ ಮಂತ್ರಿ ಆಗಿರುವಂತಹ ನರೇಂದ್ರ ಮೋದಿಜಿ ಅವರು ಮಹಿಳೆಯರಿಗಾಗಿ 2016 ರಲ್ಲಿ ಈಗ ಉಜ್ವಲ ಯೋಜನೆಯನ್ನು ಜಾರಿಗೆ ಮಾಡಿದರು. ಈ ಒಂದು ಯೋಜನೆ ಮೂಲಕ ಈಗ ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ಇರುವಂತಹ ಮಹಿಳೆಯರು ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಅವರ ಆರೋಗ್ಯಕ್ಕೆ ತುಂಬಾ ಹಾನಿ ಉಂಟಾಗುವುದು. ಆದ ಕಾರಣ ಈ ಒಂದು ಯೋಜನೆ ಮೂಲಕ ಈಗ ಅವರಿಗೆ ಉಚಿತವಾಗಿ ಗ್ಯಾಸ್ ಸಿಲೆಂಡರನ್ನು ನೀಡುವ ಉದ್ದೇಶದಿಂದಾಗಿ ಈ ಒಂದು ಯೋಜನೆ ಈಗ ಜಾರಿಗೆ ಮಾಡಿದ್ದಾರೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಪಡೆದುಕೊಳ್ಳಿ.
ಉಜ್ವಲ್ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಮಹಿಳೆಯರಿಗೆ ಅಡುಗೆಯನ್ನು ಮಾಡಲು ಹಾಗೂ ಆರೋಗ್ಯಕರವಾಗಿ ಅವರು ಉಳಿಯುವಂತೆ ಮಾಡುವ ಸಲುವಾಗಿ ಈ ಒಂದು ಯೋಜನೆ ಜಾರಿಗೆ ಮಾಡಲಾಗಿದೆ. ಹಾಗಿದ್ದರೆ ಈಗ ಈ ನೀವು ಕೂಡ ಈ ಒಂದು ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಈ ಯೋಜನೆ ಅರ್ಜಿ ಸಲ್ಲಿಸುವವರು ಭಾರತದ ಪ್ರಜೆಯಾಗಿರಬೇಕಾಗುತ್ತದೆ.
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲ ಮಹಿಳೆಯರಿಗೆ ಮಾತ್ರ ಅವಕಾಶ.
- ಒಂದು ಯೋಜನೆಗೆ ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ.
- ಈ ಒಂದು ಯೋಜನೆಗಾಗಿ ಸಲ್ಲಿಸುವ ಮಹಿಳೆಯು ಬಡತನ ರೇಖೆಗಿಂತ ಕೆಳಗಿರಬೇಕಾಗುತ್ತದೆ.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ರೇಷನ್ ಕಾರ್ಡನ್ನು ಹೊಂದಿರಬೇಕಾಗುತ್ತದೆ.
- ಆನಂತರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಈ ಮೊದಲು ಯಾವುದೇ ರೀತಿಯ ಎಲ್ಪಿಜಿ ಗ್ಯಾಸ್ ಸಿಲೆಂಡರನ್ನು ಹೊಂದಿರಬಾರದು.
ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಪಾಸ್ಪೋರ್ಟ್ ಭಾವಚಿತ್ರ
- ವಾಸಸ್ಥಳ ದೃಢೀಕರಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನೀವು ಈಗ ನಿಮ್ಮ ಹತ್ತಿರ ಇರುವಂತ ಆನ್ಲೈನ್ ಕೇಂದ್ರಕ್ಕೆ ಭೇಟಿಯನ್ನು ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಲೇಖನವನ್ನು ನೀವು ಕೊನೆವರೆಗೂ ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು