Annabhgya Yojana Update: ಅನ್ನಭಾಗ್ಯ ಯೋಜನೆ ಹಣವು ಜಮಾ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಸರ್ಕಾರವು ನೀಡುತ್ತಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಯೋಜನೆ ಈ ಅನ್ನಭಾಗ್ಯ ಯೋಜನೆ. ಈ ಒಂದು ಯೋಜನೆಯ ಮೂಲಕ ಈಗ ಪ್ರತಿ ತಿಂಗಳು 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿ ಹಣವನ್ನು ಈಗ ಸರ್ಕಾರವು ಪ್ರತಿಯೊಬ್ಬ ಮಹಿಳೆಯರ ಖಾತೆಗಳು ಈಗಾಗಲೇ ಜಮಾ ಮಾಡುತ್ತಾ ಇತ್ತು. ಅದೇ ರೀತಿಯಾಗಿ ಡಿಸೆಂಬರ್ ತಿಂಗಳ ಅಕ್ಕಿಯ ಹಣವನ್ನು ಕೂಡ ಜಮಾ ಆಗಿದೆ ಎಂಬುದನ್ನು ನೀವು ಯಾವ ರೀತಿಯಾಗಿ ತಿಳಿದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ನೀಡುವಂತಹ ಪ್ರತಿಯೊಂದು ಯೋಜನೆಗಳು ಈಗ ತುಂಬಾ ಲಾಭದಾಯಕವಾಗಿವೆ. ಅದೇ ರೀತಿಯಾಗಿ ಅವುಗಳಿಂದ ಎಲ್ಲಾ ಜನರು ಕೂಡ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈಗ ಈ ಒಂದು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಬಂದಿರುವ ಮಾಹಿತಿ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ಇದೆ.
ಅನ್ನಭಾಗ್ಯ ಯೋಜನೆಯ ಮಾಹಿತಿ
ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ತಾನು ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿತ್ತು. ಆದರೆ ಅಕ್ಕಿಯ ಅಭಾವದಿಂದಾಗಿ ಈಗ ಐದು ಕೆಜಿ ಅಕ್ಕಿ ಹಾಗು ಇನ್ನು ಐದು ಕೆಜಿ ಅಕ್ಕಿಯ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಸರ್ಕಾರವು ಜಮಾ ಮಾಡುತ್ತಾ ಬರುತ್ತಿತ್ತು. ಅದೇ ರೀತಿಯಾಗಿ ಈಗಾಗಲೇ ಕೆಲವು ತಿಂಗಳು ಅಕ್ಕಿಯ ಹಣವನ್ನು ಸರ್ಕಾರವು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೂ ಕೂಡ ಜಮಾ ಮಾಡಿದೆ. ಹಾಗಿದ್ದರೆ ಈಗ ನಿಮ್ಮ ಖಾತೆಗೂ ಕೂಡ ಅಕ್ಕಿಯ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಮಾಹಿತಿಯನ್ನು ಈಗ ನೀವು ತಿಳಿದುಕೊಳ್ಳಬಹುದು.
ಸ್ನೇಹಿತರೆ ಒಂದು ವೇಳೆ ನಿಮಗೆ ಅಕ್ಕಿಯ ಹಣವು ಜಮಾ ಆಗದೆ ಇದ್ದರೆ ನೀವು ನಿಮ್ಮ ರೇಷನ್ ಕಾರ್ಡ್ ಸದಸ್ಯರ EKYC ಅನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಬಂದು ತಲುಪುತ್ತದೆ. ಅದೇ ರೀತಿಯಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಕೂಡ ಮಾಡಿಸಬೇಕಾಗುತ್ತದೆ. ಒಂದು ವೇಳೆ ನೀವು ಇವುಗಳನ್ನು ಮಾಡಿಸದೆ ಇದ್ದರೆ ನಿಮಗೆ ಅನ್ನಭಾಗ್ಯ ಯೋಜನೆ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಯಾವುದೇ ಕಾರಣಕ್ಕೂ ನಿಮಗೆ ಬಂದು ತಲುಪುವುದಿಲ್ಲ. ಆದಕಾರಣ ನೀವು ಈ ಕೂಡಲೇ ಹೋಗಿ ಈ ಒಂದು ಅಪ್ಡೇಟ್ಗಳನ್ನು ಮಾಡಿಸಿಕೊಳ್ಳುವುದು ಉತ್ತಮ.
ಅನ್ನಭಾಗ್ಯ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ಸ್ನೇಹಿತರೆ ನಿಮ್ಮ ಖಾತೆಗೂ ಕೂಡ ಈಗ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವೇನಾದರೂ ತಿಳಿದುಕೊಳ್ಳಬೇಕಾದರೆ ಮೊದಲಿಗೆ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳುವುದರ ಮೂಲಕ ಲಾಗಿನ್ ಆಗಿ. ಆನಂತರ ನೀವು ಅದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಇದುವರೆಗೂ ಬಂದಿರುವಂತಹ ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆ ಹಣವಾಗಲಿ ನಿಮಗೆ ಜಮಾ ಆಗಿದೆ ಇಲ್ಲವೇ ಎಂಬುದರ ಸಂಪೂರ್ಣ ವಾದಂತಹ ಮಾಹಿತಿ ನೀವು ಆ ಒಂದು ಅಪ್ಲಿಕೇಶನ್ ನಲ್ಲಿ ಈಗ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.