Ganga Kalyana Yojana : ರೈತರಿಗೆ ಈಗ ಉಚಿತ ಬೊರವೆಲ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ನಮ್ಮ ರಾಜ್ಯ ಸರ್ಕಾರವು ನೀಡುವಂತಹ ವಿವಿಧ ನಿಗಮಗಳ ವತಿಯಿಂದ ರೈತರಿಗೆ ಉಚಿತ ಬೋರ್ವೆಲ್ಗಳನ್ನು ಕೊರೆಸಿಕೊಳ್ಳಲು ಈಗ ಗಂಗಾ ಕಲ್ಯಾಣ ಯೋಜನೆ ಮೂಲಕ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಉಚಿತ ಬೋರವೆಲ ನೀವು ಪಡೆದುಕೊಳ್ಳಬಹುದು. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು ಮತ್ತು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಅದೇ ರೀತಿಯಾಗಿ ಈಗ ಯಾರೆಲ್ಲಾ ಅತಿ ಸಣ್ಣ ರೈತರು ಇದ್ದಾರೋ ಅವರು ಈಗ ಈ ಗಂಗಾ ಕಲ್ಯಾಣ ಯೋಜನೆ ಮೂಲಕ ಅವರು ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆದು ಹಾಗೂ ಪಂಪ ಮೋಟಾರ್ ಹಾಗೂ ವಿದ್ಯುತ್ ಸಂಪರ್ಕವನ್ನು ಈ ಒಂದು ಯೋಜನೆ ಮೂಲಕ ಅವರು ಪಡೆದುಕೊಳ್ಳಬಹುದಾಗಿದೆ. ಆದಕಾರಣ ಈ ಕೂಡಲೇ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬಹುದು.
ಗಂಗಾ ಕಲ್ಯಾಣ ಯೋಜನೆ
ಸ್ನೇಹಿತರೆ ಈಗ ಬೆಂಗಳೂರ ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಈ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ನೀವು ವೈಯಕ್ತಿಕವಾಗಿ ಕೊಳವೆ ಬಾವಿಗಳನ್ನು ಕೋರೆಸಿಕೊಳ್ಳಬೇಕೆಂದುಕೊಂಡರೆ ಈ ಒಂದು ಕೊಳವೆ ಬಾವಿಯನ್ನು ಕೊರೆಸಿಕೊಳ್ಳಲು ದೊರೆಯುವ ತಗಲುವಂತಹ ವೆಚ್ಚ ಹಾಗೂ ವಿದ್ಯುತ್ ಸಂಪರ್ಕ ವೆಚ್ಚ ಅದೇ ರೀತಿಯಾಗಿ ಪ್ರತಿ ಬಾವಿಗೆ 75,000 ಹಣವನ್ನು ಎಸ್ಕಾಂ ಗೆ ಸರ್ಕಾರವು ಪಾವತಿ ಮಾಡುತ್ತದೆ. ಅದೇ ರೀತಿಯಾಗಿ ಇನ್ನುಳಿದಂತ 3 ಲಕ್ಷ ರೂಪಾಯಿ ಹಣವನ್ನು ಕೂಡ ಸರ್ಕಾರವು ಪಾವತಿ ಮಾಡುತ್ತದೆ.
ಅದೇ ರೀತಿಯಾಗಿ ನೀವು ಐವತ್ತು ಸಾವಿರದವರೆಗೆ ಸಾಲವನ್ನು ಪಡೆದುಕೊಂಡು ಶೇಕಡ 4% ರಷ್ಟು ಬಡ್ಡಿ ದರದಲ್ಲಿ ನೀವು ಹಣವನ್ನು ಕೂಡ ಪಡೆದುಕೊಳ್ಳಬಹುದು. ನೀವು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆಯಬೇಕಾದರೆ ಕನಿಷ್ಠ ಎರಡು ಎಕರೆ ಭೂಮಿ ಯನ್ನು ನೀವು ಹೊಂದಿರಬೇಕು.
ಅರ್ಹತೆಗಳು ಏನು ?
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ ವಯಸ್ಸು 18 ವರ್ಷದಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
- ಹಾಗೆ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶಗಳಿಗೆ 90,000 ಹಾಗೂ ಪಟ್ಟಣ ಪ್ರದೇಶಗಳಲ್ಲಿ 1.20 ಲಕ್ಷ ಇರಬೇಕಾಗುತ್ತದೆ.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ ಯು ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕು.
- ಅರ್ಜಿಯನ್ನು ಸಲ್ಲಿಸುವಂತಹ ರೈತರು ಕರ್ನಾಟಕದ ಖಾಯಂ ನಿವಾಸ ಆಗಿರಬೇಕು.
ದಾಖಲೆಗಳು ಏನು ?
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆರ್ ಟಿ ಸಿ
- ಬ್ಯಾಂಕ್ ಖಾತೆ ವಿವರ
- ಸ್ವಯಂ ಘೋಷಣೆ ಪತ್ರ
- ಅರ್ಜಿದಾರರ ಇತ್ತೀಚಿನ ಭಾವಚಿತ್ರ
- ಭೂ ಕಂದಾಯ ಪಾವತಿ ರಸೀದಿ
- ಜಾಮೀನುದಾರ ಸ್ವಯಂ ಘೋಷಣೆ ಪತ್ರ
- ಹಿಡುವಳಿದಾರರ ದೃಢೀಕರಣ ಪತ್ರ
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ ?
LINK : APPLY NOW
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದರೆ ನಾವು ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿ. ಈ ಒಂದು ಯೋಜನೆ ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ಲೇಖನವನ್ನು ನೀವು ಕೊನೆವರೆಗೂ ಧನ್ಯವಾದಗಳು.