Gruhalakshmi DBT Status Check : ಗೃಹಲಕ್ಷ್ಮಿ ಯೋಜನೆ ಹಣವನ್ನು DBT ಮೂಲಕ ಚೆಕ್ ಮಾಡುವುದು ಹೇಗೆ ? ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕದ ಜನತೆಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಯಾರೆಲ್ಲ ಗೃಹಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವೇನಾದರೂ ಈಗ ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಹಂತಗಳ ಮೂಲಕ ನೀವು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೆ ಎಂಬುದನ್ನು DBT ಅಪ್ಲಿಕೇಶನ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಒಂದು ಯೋಜನೆಯನ್ನು ನೀವು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಇದೆ.
ಅದೇ ರೀತಿಯಾಗಿ ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಈ ಒಂದು ಯೋಜನೆಯನ್ನು ತರುವ ಮುಖ್ಯ ಉದ್ದೇಶವೇನೆಂದರೆ ಈಗ ಮಹಿಳೆಯರ ಸಬಲೀಕರಣಕ್ಕಾಗಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಅದೇ ರೀತಿಯಾಗಿ ಈಗಾಗಲೇ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಈ ಒಂದು ಯೋಜನೆ ಲಾಭವನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ.
ಅದೇ ರೀತಿಯಾಗಿ ಈ ಒಂದು ಹಣದಿಂದ ಈಗ ಮಹಿಳೆಯರು ವಾಷಿಂಗ್ ಮಷೀನ್, ಫ್ರೀಜ್ ಇನ್ನೂ ಹಲವಾರು ವಸ್ತುಗಳನ್ನು ಈಗ ಮಹಿಳೆಯರು ಖರೀದಿ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಈಗ ಕೂಡಿಟ್ಟು ಕೆಲವೊಂದಷ್ಟು ಅಜ್ಜಿಯರು ಕೂಡ ಈಗ ಊರಿಗೆ ಊಟವನ್ನು ಹಾಕಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣದಿಂದ ಮಹಿಳೆಯರು ತುಂಬಾ ಕೆಲಸಗಳನ್ನು ಈಗಾಗಲೇ ಮಾಡುತ್ತಿದ್ದಾರೆ.
ಅದೇ ರೀತಿಯಾಗಿ ಈಗ ನೀವೇನಾದರೂ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು DBT ಮೂಲಕ ಚೆಕ್ ಮಾಡಿಕೊಳ್ಳಬೇಕಾದರೆ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಸರಿಯಾದ ರೀತಿಯಲ್ಲಿ ಚೆಕ್ ಮಾಡಿಕೊಂಡು ನೀವು ಕೂಡ ನಿಮ್ಮ ಖಾತೆಯ ಗೃಹಲಕ್ಷ್ಮಿ ಯೋಜನೆಯನ್ನು ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.
ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
ಸ್ನೇಹಿತರೆ ಈಗ ಗೃಹಲಕ್ಷ್ಮಿ ಯೋಜನೆ 2000 ಹಣವನ್ನು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಲು ನಾವು ಈ ಕೆಳಗೆ ತಿಳಿಸಿರುವ ಹಂತಗಳನ್ನು ತಿಳಿದುಕೊಳ್ಳುವುದರ ಮೂಲಕ ನೀವು DBT ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
- ಈಗ ನೀವು ಹಣವನ್ನು ಚೆಕ್ ಮಾಡಿ ಕೊಳ್ಳಬೇಕಾದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ನೀವು DBT ಕರ್ನಾಟಕ ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅಪ್ಲಿಕೇಶನ್ ಓಪನ್ ಮಾಡಿಕೊಂಡು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ. ಗೆಟ್ ಒಟಿಪಿ ಎಂಬುದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ. ಆ ಒಂದು ಓಟಿಪಿಯನ್ನು ನೀವು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ. ನೀವು ಆ ಓಟಿಪಿ ಎಂಟರ್ ಮಾಡಿ. ವೇರಿಫೈ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನಿಮ್ಮ ಮುಂದೆ ಫಲಾನುಭವಿಗಳ ವೈಯಕ್ತಿಕ ವಿವರವು ನಿಮ್ಮ ಮುಂದೆ ಕಾಣುತ್ತದೆ. ಆಗ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ಓಕೆ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನೀವು ಒಂದು ನಾಲ್ಕು ಅಂಕಿಯ MPIN ಅನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಆನಂತರ ನೀವು ಅಲ್ಲಿ ಸೆಲೆಕ್ಟ್ ಬೆನಿಫಿಶಿಯರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಆಯ್ಕೆ ಮಾಡಿರುವಂತಹ ಫಲಾನುಭವಿಗಳನ್ನು ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಮತ್ತೆ ಕ್ರಿಯೇಟ್ ಮಾಡಿರುವಂತಹ MPIN ಅನ್ನು ಅಲ್ಲಿ ಎಂಟರ್ ಮಾಡಿ ಓಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ತದನಂತರ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನಿಮಗೆ ಇದುವರೆಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ಬಂದಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ನೀವು ಆ ಒಂದು ಸ್ಟೇಟಸ್ ನಲ್ಲಿ ಈಗ ತಿಳಿದುಕೊಳ್ಳಬಹುದಾಗಿದೆ.
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರಕಾರವಾಗಿ ನೀವು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಲೇಖನವನ್ನು ಕೊನೆವರೆಗೂ ಓದಿದಕ್ಕಾಗಿ ಧನ್ಯವಾದಗಳು.