IDFC First Bank Scholarship: MBA ವಿದ್ಯಾರ್ಥಿಗಳಿಗೆ IDFC FIRST ಬ್ಯಾಂಕ್ ವಿದ್ಯಾರ್ಥಿವೇತನ – ವರ್ಷಕ್ಕೆ ₹1 ಲಕ್ಷ ಸಹಾಯಧನ!
ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ MBA ವ್ಯಾಸಂಗವನ್ನು ಸುಲಭಗೊಳಿಸಲು ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್(IDFC FIRST Bank) ಪ್ರೋತ್ಸಾಹದೊಂದಿಗೆ 2025-27ರ ಅವಧಿಗೆ ವಿಶೇಷ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ಯೋಜನೆಯಡಿ ಎರಡು ವರ್ಷಗಳ ಕಾಲ, ವರ್ಷಕ್ಕೆ ₹1 ಲಕ್ಷದಂತೆ ಒಟ್ಟು ₹2 ಲಕ್ಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿವೇತನದ ಉದ್ದೇಶ ಮತ್ತು ಹಿನ್ನೆಲೆ
ಐಡಿಎಫ್‌ಸಿ ಬ್ಯಾಂಕ್ ಮತ್ತು ಕ್ಯಾಪಿಟಲ್ ಫಸ್ಟ್ ವಿಲೀನದ ನಂತರ ಸ್ಥಾಪಿತವಾದ IDFC FIRST ಬ್ಯಾಂಕ್ ನಿಂದ, ಸಮಾಜದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ನೀಡುವ ಉದ್ದೇಶದಿಂದ ಈ CSR ವಿದ್ಯಾರ್ಥಿವೇತನ ಯೋಜನೆ ಆರಂಭವಾಗಿದೆ. ಈ ಯೋಜನೆಯಡಿ ದೇಶದ ವಿವಿಧ ಆಯ್ದ B-School ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ
20 ಜುಲೈ 2025 – ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರ್ಹತಾ ಮಾನದಂಡಗಳು (Who Can Apply?)
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
- ಅಭ್ಯರ್ಥಿಗಳು 2 ವರ್ಷದ ಪೂರ್ಣಾವಧಿಯ MBA/PGDM ಕಾರ್ಯಕ್ರಮದ ಮೊದಲ ವರ್ಷದ ವಿದ್ಯಾರ್ಥಿಯಾಗಿರಬೇಕು.
- ಆಯ್ದ ಕಾಲೇಜುಗಳಲ್ಲೊಬ್ಬMBA ಪ್ರೋಗ್ರಾಂಗೆ ಸೇರ್ಪಡೆ ಹೊಂದಿರಬೇಕು.
- ಕುಟುಂಬದ ಒಟ್ಟು ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
- ಕಾರ್ಯನಿರ್ವಾಹಕ ಅಥವಾ ಸಂಯೋಜಿತ MBA ಕೋರ್ಸ್‌ಗಳಿಗೆ ಅರ್ಹತೆ ಇಲ್ಲ.
ವಿದ್ಯಾರ್ಥಿವೇತನದ ಮೊತ್ತ (Scholarship Amount)
IDFC FIRST Bank ನಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ:
- ವರ್ಷಕ್ಕೆ ₹1,00,000 ಸಹಾಯಧನ
- 2 ವರ್ಷಗಳ ಅವಧಿಗೆ ಒಟ್ಟು ₹2,00,000 ವಿದ್ಯಾರ್ಥಿವೇತನ
ಈ ಹಣವನ್ನು ನೇರವಾಗಿ ಕಾಲೇಜುಗಳ ಖಾತೆಗೆ ಜಮಾ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು (Required Documents)
- ಆಧಾರ್ ಕಾರ್ಡ್ ಪ್ರತಿ
- ಅಭ್ಯರ್ಥಿಯ ಪಾಸ್‌ಪೋರ್ಟ್ ಸೈಜ್ ಪೋಟೋ
- ಬ್ಯಾಂಕ್ ಪಾಸ್ ಬುಕ್
- ಕಾಲೇಜು ಶುಲ್ಕ ಪಾವತಿ ವಿವರಗಳು
- ಪ್ರವೇಶ ದೃಡೀಕರಣ ಪತ್ರ
- 12ನೇ ತರಗತಿಯ ಅಂಕಪಟ್ಟಿ
- ಪೋಷಕರ ಆದಾಯ ಪ್ರಮಾಣಪತ್ರ
- ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ
ಅರ್ಜಿ ಸಲ್ಲಿಸುವ ವಿಧಾನ (How to Apply?)
- Apply Now ಲಿಂಕ್ ಮೂಲಕ Buddy4Study ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹೊಸ ಬಳಕೆದಾರರೆಂದರೆ ಖಾತೆ ರಚಿಸಿ. ಈಗಾಗಲೇ ಖಾತೆ ಹೊಂದಿದರೆ ಲಾಗಿನ್ ಮಾಡಿ.
- “IDFC FIRST Bank MBA Scholarship” ಆಯ್ಕೆಮಾಡಿ.
- ಅರ್ಜಿ ನಮೂನೆ ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಗೆ “Submit” ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ನಿಯಮಗಳು ಮತ್ತು ಷರತ್ತುಗಳು (Terms & Conditions)
- ಅರ್ಹತೆ ಹೊಂದಿದ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಎಲ್ಲಾ ದಾಖಲೆಗಳನ್ನು ನಿಖರವಾಗಿ ಸಲ್ಲಿಸಬೇಕು.
- ವಿದ್ಯಾರ್ಥಿವೇತನವನ್ನು ಬ್ಯಾಂಕ್ ತನ್ನ ಸ್ವಂತ ವಿವೇಚನೆಯ ಮೇರೆಗೆ ನೀಡುತ್ತದೆ.
- ಆಯ್ಕೆಯಾದ ಅಭ್ಯರ್ಥಿಗಳು IDFC FIRST ಬ್ಯಾಂಕ್ ಸಂಚಾಲಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿರುತ್ತದೆ.
- ವಿದ್ಯಾರ್ಥಿಗಳು ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದರೆ ಮಾತ್ರ ಎರಡನೇ ವರ್ಷದ ಸಹಾಯಧನ ಲಭ್ಯವಾಗುತ್ತದೆ.
- ಬ್ಯಾಂಕ್ ನ ಉದ್ಯೋಗಿಗಳ ಮಕ್ಕಳು ಈ ಯೋಜನೆಗೆ ಅರ್ಹರಲ್ಲ.
ಸಂಪರ್ಕ (Helpline):
ಮೇಲ್ ಐಡಿಗೆ ಬರೆಯಿರಿ:
mbascholarship@idfcfirstbank.com
MBA ವ್ಯಾಸಂಗ ಮಾಡಲು ಉತ್ಸಾಹವಿರುವ ನೀವು ಈ ಸಹಾಯಧನದೊಂದಿಗೆ ನಿಮ್ಮ ವಿದ್ಯಾಭ್ಯಾಸದ ಕನಸನ್ನು ಪೂರೈಸಬಹುದು. ಅರ್ಜಿ ಸಲ್ಲಿಕೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿವೆ, ಶೀಘ್ರದಲ್ಲಿ ಅರ್ಜಿ ಸಲ್ಲಿಸಿ!