Ration Card Apply: ರೇಷನ್ ಕಾರ್ಡ್ ಗೆ ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಮಗೂ ಅವಕಾಶ!
ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ – ಈಗಿನಿಂದ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರುವವರು ತಮ್ಮ ಕಾರ್ಡ್‌ನ ವಿವರಗಳಲ್ಲಿ ತೊಂದರೆ ಇದ್ದರೆ, ಸರಿಪಡಿಸಿಕೊಳ್ಳಲು ಇದು ಒಳ್ಳೆಯ ಅವಕಾಶ.
ಇದೀಗ ನಾವು ಈ ಬ್ಲಾಗ್‌ನಲ್ಲಿ ಮಾಹಿತಿ ನೀಡುತ್ತಿರುವುದು –
- ಯಾವೆಲ್ಲ ತಿದ್ದುಪಡಿಗೆ ಅರ್ಜಿ ಹಾಕಬಹುದು?
- ಅರ್ಜಿ ಸಲ್ಲಿಸುವ ವಿಧಾನ ಏನು?
- ಯಾವ ದಾಖಲೆಗಳು ಬೇಕು?
- ತಿದ್ದುಪಡಿ ಸ್ಥಿತಿ ನೋಡೋದು ಹೇಗೆ?
ರೇಷನ್ ಕಾರ್ಡ್ ತಿದ್ದುಪಡಿ – ಯಾವೆಲ್ಲ ಬದಲಾವಣೆಗೆ ಅವಕಾಶ ಇದೆ?
ಪಿಡುತರ ಚೀಟಿ ಹೊಂದಿರುವವರು ಈ ಕೆಳಗಿನ ತಿದ್ದುಪಡಿಗೆ ಅರ್ಜಿ ಹಾಕಬಹುದು
- ಹೊಸ ಸದಸ್ಯರ ಸೇರ್ಪಡೆ
- ವಿಳಾಸ ಬದಲಾವಣೆ
- ಮರಣ ಹೊಂದಿದ ಸದಸ್ಯರ ಹೆಸರು ತೆಗೆದುಹಾಕುವುದು
- ಪಡಿತರ ಚೀಟಿಗೆ ಇ-ಕೆವೈಸಿ (eKYC) ಮಾಡುವುದು
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ಪೋಟೋ ಅಪ್‌ಡೇಟ್ ಮಾಡುವುದು
- ಹೊಸ ರೇಷನ್ ಕಾರ್ಡ್ ಪ್ರಿಂಟ್ ಪಡೆಯುವುದು
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ತಮ್ಮ ಗ್ರಾಮ/ನಗರದ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳ ನೆರವಿನಿಂದ ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಹೊಸ ಸದಸ್ಯ ಸೇರ್ಪಡೆಗೆ
- 6 ವರ್ಷ ಮೇಲ್ಪಟ್ಟವರಿಗೆ: ಆಧಾರ್ ಕಾರ್ಡ್ + ಆದಾಯ ಪ್ರಮಾಣ ಪತ್ರ
- 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ: ಜನನ ಪ್ರಮಾಣ ಪತ್ರ + ಆಧಾರ್ ಕಾರ್ಡ್
- ವಿಳಾಸ ಬದಲಾವಣೆ
- ಹೊಸ ವಿಳಾಸದ ಪೂರಕ ದಾಖಲೆ (ಉದಾ: ವಿದ್ಯುತ್ ಬಿಲ್, ಬ್ಯಾಂಕ್ ಪಾಸ್‌ಬುಕ್)
- ಅರ್ಜಿದಾರರ ಮೊಬೈಲ್ ಸಂಖ್ಯೆ
- ಹಳೆಯ ರೇಷನ್ ಕಾರ್ಡ್ ಪ್ರತಿರೂಪ
- ಸದಸ್ಯರ ಹೆಸರು ತೆಗೆದುಹಾಕಲು
- ಮರಣ ಪ್ರಮಾಣ ಪತ್ರ
- ಇತರ ತಿದ್ದುಪಡಿಗೆ
- ಆಧಾರ್ ಕಾರ್ಡ್ ಪ್ರತಿಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ಪಡಿತರ ಚೀಟಿಯ ಪ್ರತಿ
- ಮೊಬೈಲ್ ಸಂಖ್ಯೆ
ಅರ್ಜಿ ಸ್ಥಿತಿಯನ್ನು ಆನ್ಲೈನ್‌ನಲ್ಲಿ ಹೇಗೆ ಪರಿಶೀಲಿಸಬೇಕು?
- ರಾಜ್ಯ ಸರ್ಕಾರದ ಆಹಾರ ಇಲಾಖೆ ವೆಬ್‌ಸೈಟ್‌ಗೆ ಹೋಗಿ – ಅಧಿಕೃತ ಲಿಂಕ್
- “e-Services” ಅಥವಾ “ಇ-ಸ್ಥಿತಿ” ಮೇಲೆ ಕ್ಲಿಕ್ ಮಾಡಿ
- “Ration Card Correction Status” ಆಯ್ಕೆ ಮಾಡಿ
- ನಿಮ್ಮ ಪಡಿತರ ಚೀಟಿಯ ಸಂಖ್ಯೆ ಹಾಗೂ ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ಹಾಕಿ “Go” ಬಟನ್ ಒತ್ತಿ
- ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ತಕ್ಷಣ ಸಿಗುತ್ತದೆ
ಟಿಪ್ಪಣಿಗಳು
- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಿ
- village one / Karnataka one ಕೇಂದ್ರಕ್ಕೆ ಬೇಟಿ ನೀಡುವುದೇ ಅತ್ಯಂತ ಸುಲಭ ಮಾರ್ಗ
- ನಿಮ್ಮ ಅರ್ಜಿ ಪ್ರಗತಿಯ ಸ್ಥಿತಿ ನಿಯಮಿತವಾಗಿ ಪರಿಶೀಲಿಸಿ
ರೇಷನ್ ಕಾರ್ಡ್‌ನಲ್ಲಿ ತಪ್ಪು ಮಾಹಿತಿ ಇದ್ದರೆ ಸರ್ಕಾರ ಈಗ ನಿಮಗೆ ಸರಿ ಮಾಡಿಕೊಳ್ಳುವ ಅವಕಾಶ ನೀಡಿದೆ. ಹೆಚ್ಚಿನ ಸೌಲಭ್ಯಗಳು ಹಾಗೂ ಸರಕಾರದ ಯೋಜನೆಗಳಿಂದ ಪ್ರಯೋಜನ ಪಡೆಯಲು ಪಡಿತರ ಚೀಟಿಯಲ್ಲಿ ಸರಿಯಾದ ಮಾಹಿತಿ ಇರುವುದು ಅತ್ಯಂತ ಅಗತ್ಯ.
ಈ ಬ್ಲಾಗ್ ನಿಮಗೆ ಉಪಯುಕ್ತವಾದರೆ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ. ನೀವು ಯಾವುದೇ ಸಹಾಯ ಬೇಕಾದರೆ ಕಾಮೆಂಟ್ ಅಥವಾ ಸಂದೇಶದ ಮೂಲಕ ಕೇಳಬಹುದು.