PSI Free Coaching: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

PSI Free Coaching: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಈ ಒಂದು ಸಮುದಾಯದವರಿಗೆ ಈಗ ವಸತಿ ಸಹಿತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲು ಈಗ ಅರ್ಜಿಯನ್ನು ಕರೆಯಲಾಗಿದೆ.

WhatsApp Float Button

PSI Free Coaching

 

ಈಗ ಮುಸ್ಲಿಂ, ಜೈನ, ಕ್ರಿಶ್ಚಿಯನ್,  ಜನಾಂಗದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಈಗ ಈ ವರ್ಷದ ಸಾಲಿಗೆ ಮಂಜೂರಾದ ವಸತಿ ಸಹಿತ ಕರ್ನಾಟಕ ರಾಜ್ಯದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ತರಬೇತಿಯನ್ನು ನೀಡಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ ಮತ್ತು ಆಸಕ್ತಿ ಇರುವಂಥವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಇರಬೇಕಾದ ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಆನಂತರ ಅಭ್ಯರ್ಥಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಆಗಿರಬೇಕಾಗುತ್ತದೆ.
  • ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿ ಇರುವಂತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ.

ಶೈಕ್ಷಣಿಕ ಅರ್ಹತೆ ಏನು?

ಈಗ ನೀವು ಕೂಡ ಈ ಒಂದು ತರಬೇತಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಸ್ನೇಹಿತರೆ ಆ ಒಂದು ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದಿರುವ ಅಂತಹ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಾಸಾಗಿರಬೇಕಾಗುತ್ತದೆ.

ವಯೋಮಿತಿ ಏನು?

ಈಗ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷವನ್ನು ಹೊಂದಿರಬೇಕಾಗುತ್ತದೆ.

ಆಯ್ಕೆ ವಿಧಾನ ಏನು?

ಈಗ ಈ ಒಂದು ಯೋಜನೆ ಅಡಿ ಅರ್ಜಿಯನ್ನು  ಸಲ್ಲಿಕೆ ಮಾಡುವಂತ ಅಭ್ಯರ್ಥಿಗಳು ಪದವಿಯಲ್ಲಿ ಗಳಿಸಿದಂತಹ ಅಂಕಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ತರಬೇತಿ ನಡೆಯುವ ಸ್ಥಳಗಳು ಏನು?

ಈ ಒಂದು ತರಬೇತಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಈಗ ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತರಬೇತಿಯನ್ನು ಅವರು ಪಡೆದುಕೊಳ್ಳಬಹುದಾಗಿದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡಿ. ಅದರಲ್ಲಿರುವ ಶೈಕ್ಷಣಿಕ ದಾಖಲೆ ಮತ್ತು ನಿಮ್ಮ ವಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

ಪ್ರಮುಖ ದಿನಾಂಕಗಳು

  • ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ: 10.05.2025
  • ಅರ್ಜಿಯನ್ನು  ಸಲ್ಲಿಸಲು ಕೊನೆಯ ದಿನಾಂಕ 23.5.2025
WhatsApp Group Join Now
Telegram Group Join Now

Leave a Comment