Women Loan Subsidy: ಮಹಿಳೆಯರಿಗಾಗಿ ಇರುವಂತಹ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ಮಾಹಿತಿ.

Women Loan Subsidy: ಮಹಿಳೆಯರಿಗಾಗಿ ಇರುವಂತಹ ಸಬ್ಸಿಡಿ ಮತ್ತು ಸಾಲದ ಯೋಜನೆಗಳ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಮಹಿಳೆಯರನ್ನು ಅರ್ಥಿಕವಾಗಿ ಸುಭದ್ರ ಗೊಳಿಸುವ ಹಾಗೂ ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಿಗೆ ಅವರನ್ನು ಸ್ವತಂತ್ರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಈಗ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಹಲವಾರು ಸಾಲ ಮತ್ತು ಸಹಾಯಧನದ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ.

WhatsApp Float Button

Women Loan Subsidy

ಈಗಾಗಲೇ ಈ ಒಂದು ಯೋಜನೆಗಳು ರಾಜ್ಯದ ವಿವಿಧ ಹಿನ್ನೆಲೆಗಳಿಂದ ಬಂದಂತಹ ಮಹಿಳೆಯರಿಗೆ ಆಧಾರವಾಗಿವೆ. ಅಷ್ಟೇ ಅಲ್ಲದೆ ಸಾಮಾನ್ಯ ವರ್ಗದಿಂದ ಹಿಡಿದು ಪರಿಶಿಷ್ಟ ಜಾತಿ ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ಮಾಜಿ ದೇವದಾಸಿ ಅವರನ್ನು ಎಲ್ಲರಿಗೂ ಪ್ರತ್ಯೇಕವಾಗಿ ವಿನ್ಯಾಸ ಮಾಡಿದಂತಹ ಯೋಜನೆಗಳು ಇವಾಗಿವೆ.

ಈಗಾಗಲೇ ಈ ಒಂದು ಎಲ್ಲಾ ಯೋಜನೆಗಳ ಪ್ರಮುಖ ಗುರಿ ಈಗ ಮಹಿಳೆಯರನ್ನು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದು ಆಗಿದೆ. ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಸ್ವಂತ ಉದ್ಯಮ ಪ್ರಾರಂಭ ಮಾಡಲು ಬೇಕಾದಂತಹ ಮೊತ್ತದಲ್ಲಿ ಸಾಲ ಹಾಗೂ ಉಚಿತ ಸಹಾಯದಿಂದ ನೀಡುವುದು ಈ ಒಂದು ಯೋಜನೆಗಳ ಮುಖ್ಯ ಉದ್ದೇಶ ವಾಗಿರುತ್ತದೆ.

ಮಹಿಳೆಯರಿಗಾಗಿ ಇರುವ ಯೋಜನೆಗಳು

  • ಚೇತನ ಯೋಜನೆ
  • ಧನಶ್ರೀ ಯೋಜನೆ
  • ಉದ್ಯೋಗಿನಿ ಯೋಜನೆ
  • ಲಿಂಗತ್ವ ಅಲ್ಪಸಂಖ್ಯಾತರ ಪುನರ್ ವಸತಿ ಯೋಜನೆ
  • ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ

ಚೇತನ ಯೋಜನೆ ಮಾಹಿತಿ

ಈಗ ಇದು ದಮನಿತ ಅಥವಾ ಸಾಮಾಜಿಕವಾಗಿ ಹಿಂದುಳಿದಂತಹ ಮಹಿಳೆಯರಿಗೆ ಈಗ ಅವರ ಸ್ವಲಂಬನೆ ಬದುಕನ್ನು ಉತ್ತೇಜಿನ ನೀಡುವ ಉದ್ದೇಶದಿಂದಾಗಿ ಈ ಒಂದು ಯೋಚನೆ ಮಹಿಳೆಯರಿಗೆ ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ಅರ್ಹ ಮಹಿಳೆಯರಿಗೆ 30,000 ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಹಾಗೆ ಈಗ ಈ ಒಂದು ಉದ್ಯಮಿ ಅಥವಾ ಉದ್ಯಮ ಪ್ರಾರಂಭ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆ ಆಗಿರಬೇಕಾಗುತ್ತದೆ.

ಧನಶ್ರೀ ಯೋಜನೆಯ ಮಾಹಿತಿ

ಈಗ ಸಾಮಾನ್ಯವಾಗಿ ಮಹಿಳೆಯರು ಈ ಒಂದು ಉದ್ಯಮಿ ಪ್ರಾರಂಭ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರವು ಈಗ ಈ ಒಂದು ಧನಶ್ರೀ ಯೋಜನೆಯ ಮಹಿಳೆಯರಿಗೆ ಜಾರಿಗೆ ಮಾಡಿದೆ. ಈಗ ಯಾವೆಲ್ಲ ಮಹಿಳೆಯ ಉದ್ಯೋಗವನ್ನು ಪ್ರಾರಂಭ ಮಾಡಬೇಕೆನ್ನುತ್ತಾರೆ. ಅವರು ಈ ಒಂದು ಯೋಜನೆ ಅಡಿಯಲ್ಲಿ 30,000  ದವರೆಗೆ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಬಹುದು.  ಈ  ಯೋಜನೆಗೆ 18 ರಿಂದ 60 ವರ್ಷದ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಬಹುದು.

ಉದ್ಯೋಗಿನಿ ಯೋಜನೆಯ ಮಾಹಿತಿ

ಈಗ ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಬ್ಯಾಂಕುಗಳ ಮೂಲಕ ಸಾಲವನ್ನು ಪಡೆಯಲು ಸಹಾಯ ಮಾಡುವುದು ಮತ್ತು ಅವರಿಗೆ ಸರ್ಕಾರದ ಕಡೆಯಿಂದ ಸಹಾಯಧನವನ್ನು ನೀಡುವುದು ಈ ಒಂದು ಯೋಚನೆ ಮುಖ್ಯ ಉದ್ದೇಶವಾಗಿರುತ್ತದೆ.

ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು 1.5 ಲಕ್ಷಕ್ಕಿಂತ ವಾರ್ಷಿಕ ಆದಾಯ ಕಡಿಮೆ ಇರಬೇಕು. ಆನಂತರ ಕನಿಷ್ಠ 18 ವರ್ಷ ವಯಸ್ಸಿನ ಮೇಲ್ಪಟ್ಟ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.  ಸಾಮಾನ್ಯವಾಗಿ ಈಗ3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಅಷ್ಟೇ ಅಲ್ಲದೆ ವಾರ್ಷಿಕವಾಗಿ 2 ಲಕ್ಷ ಆದಾಯದ ಮಿತಿಯಲ್ಲಿರುವಂತ  ಮಹಿಳೆಯರಿಗೆ 1 ಲಕ್ಷದಿಂದ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಒಂದು ಯೋಜನೆ ಮೂಲಕ ನಿಮಗೆ ಬ್ಯಾಂಕುಗಳ ಮೂಲಕವೇ ನೇರವಾಗಿ ಸಾಲ ದೊರೆಯುತ್ತದೆ. ಅಷ್ಟೇ ಅಲ್ಲದೆ ನಿಗಮದ ಮೂಲಕ ಸಹಾಯಧನವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯ ಮಾಹಿತಿ

ಈಗ ಈ ಒಂದು ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಮಂಗಳಮುಖಿಯರು ಇವರಿಗೀಗ ಆದಾಯ ಉತ್ಪನ್ನ ಚಟುವಟಿಕೆ ಪ್ರಾರಂಭ ಮಾಡಲು ಈಗ ಆರ್ಥಿಕವಾಗಿ ನೆರವು ನೀಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ. ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತ ಮಹಿಳೆಯರು 30,000 ದವರೆಗೆ ಉಚಿತವಾಗಿ ಧನ ಸಹಾಯವನ್ನು ಪಡೆದುಕೊಳ್ಳಬಹುದು.

ಮಾಜಿ ದೇವದಾಸಿ ಪುನರ್ ವಸತಿ ಯೋಜನೆಯ ಮಾಹಿತಿ

ಈಗ 1993 – 94ರ ಮತ್ತು 2007 – 2008 ರಲ್ಲಿ ಸರ್ವೆ ಮಾಡಿದಂತಹ ಸಮಯದಲ್ಲಿ ಈಗ ಗುರುತಿಸಲಾದಂತಹ ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಯೋಜನೆಯ ಮೂಲಕ ಗೌರವಿತ ಬದುಕು ನೀಡುವ ಉದ್ದೇಶದಿಂದಾಗಿ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 30000 ವರೆಗೆ ಉಚಿತ ಸಹಾಯಧನವನ್ನು ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಏನು?

ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ಯೋಜನೆಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರತಿ ವರ್ಷವೂ ಕೂಡ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಈ ಒಂದು ಅರ್ಜಿಗಳನ್ನು ಪ್ರಾರಂಭ ಮಾಡಿರುತ್ತದೆ. ಈಗ ನೀವು ಕೂಡ  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವಂತಹ ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ಈ ಮೇಲೆ ಪ್ರತಿಯೊಂದು ಮಾಹಿತಿಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

WhatsApp Group Join Now
Telegram Group Join Now

Leave a Comment