Vidava Pension Yojana: ರೈತನ ಪತ್ನಿಗೆ ಇನ್ನು ಮುಂದೆ ವಿಧವಾ ವೇತನ ಯೋಜನೆ! ಇಲ್ಲಿದೆ ನೋಡಿ ಸಂಪೂರ್ಣವಾದಂತಹ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ವತಿಯಿಂದ ಈಗಾಗಲೇ ಸ್ನೇಹಿತರೆ ಸಾಲದ ಹೆಚ್ಚಳದಿಂದಾಗಿ ಯಾವೆಲ್ಲ ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಅಂತಹ ರೈತ ಪತ್ನಿಯರಿಗೆ ಈಗ ವಿಧವಾದ ವೇತನ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆಯ ಮೂಲಕ ಈಗ ರೈತನ ಪತ್ನಿಗೆ ವಿಧವಾ ವೇತನವನ್ನು ಈಗ ಪ್ರತಿ ತಿಂಗಳು ನೀಡಲಾಗುತ್ತದೆ.
ಹಾಗೆ ಈಗ ರಾಜ್ಯದಲ್ಲಿರುವಂತಹ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ವಿಷಯವನ್ನು ಈಗ ರಾಜ್ಯ ಸರ್ಕಾರವು ಗಂಭೀರವಾಗಿ ತನಿಖೆ ಮಾಡಿದ್ದು. ಈಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವಂತಹ ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ರೈತರ ಕುಟುಂಬಗಳು ಹಿತಾಸಕ್ತಿ ಕಾಪಾಡುವ ನಿಟ್ಟಿನ ಸಲುವಾಗಿ ಈಗ ಆ ಒಂದು ರೈತನ ಪತ್ನಿಗೆ ವಿಧವಾ ವೇತನ ನೀಡುವಂತಹ ಯೋಜನೆಯನ್ನು ಈಗ ಜಾರಿಗೆ ಮಾಡಿದ್ದಾರೆ. ನೀವು ಕೂಡ ಈ ಒಂದು ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಒಂದು ಯೋಜನೆಯ ಅರ್ಹತೆಗಳು ಏನು?
ಈಗ ಸ್ನೇಹಿತರೆ ಈ ಒಂದು ಯೋಜನೆಗೆ ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಅಂತಹ ರೈತರು ಈಗ ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಅವರು ಗುರುತಿಸಿ ಪರಿಹಾರ ಧನವನ್ನು ಪಡೆದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ಆ ಒಂದು ಮಹಿಳೆಯು ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತ ದಾಖಲೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕೃಷಿ ಇಲಾಖೆಯಿಂದ ಪರಿಹಾರ ಪಡೆದುಕೊಂಡಿರುವಂತಹ ಆದೇಶದ ಪ್ರತಿಯನ್ನು ನೀವು ಹೊಂದಿರಬೇಕಾಗುತ್ತದೆ.
- ಆನಂತರ ಆ ಒಂದು ಅಭ್ಯರ್ಥಿಯು ಅಟಲ್ ಜಿ ಜನಸ್ನೇಹಿ ಕೇಂದ್ರದ ಮೂಲಕ ಈಗ ನಿಗದಿತ ಅರ್ಜಿಯನ್ನು ಪಡೆದುಕೊಂಡು ಆ ಒಂದು ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಕೆ ಮಾಡಬೇಕು.
- ಆನಂತರ ಆ ಒಂದು ಅಭ್ಯರ್ಥಿಯು ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳನ್ನು ನೀಡಬೇಕು.
- ತದನಂತರ ಆ ಒಂದು ಅಭ್ಯರ್ಥಿಯ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಪಿಂಚಣಿ ಮೊತ್ತ ಏನು?
ಸ್ನೇಹಿತರೆ ಈಗ ರೈತ ಪತ್ನಿಯರಿಗೆ ಈಗ ವಿಧವಾ ವೇತನ ಯೋಜನೆ ಅಡಿಯಲ್ಲಿ ಈಗ ಪ್ರತಿ ತಿಂಗಳು ಫಲಾನುಭವಿಯ ಖಾತೆಗಳಿಗೆ 2000 ಹಣವನ್ನು ಈ ಒಂದು ಯೋಜನೆ ಮೂಲಕ ಜಮಾ ಮಾಡಲಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ರೈತ ಪತ್ನಿಯರಿಗೆ ವಿಧವಾ ವೇತನವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ಮೊದಲು ನೀವು ಆಫ್ಲೈನ್ ಮೂಲಕ ವಾಸ ಸ್ಥಳ ವ್ಯಾಪ್ತಿಯಲ್ಲಿ ಬರುವಂತಹ ಅಟಲ್ ಜಿ ಜನಸ್ನೇಹಿ ಕೇಂದ್ರಕ್ಕೆ ನೀವು ಭೇಟಿಯನ್ನು ನೀಡಿ. ಅಲ್ಲಿ ನೀವು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.