Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ!
ರಾಜ್ಯ ಸರ್ಕಾರದಿಂದ ರೈತರಿಗಾಗಿ ಅನೇಕ ಸಬ್ಸಿಡಿ ಆಧಾರಿತ ಯೋಜನೆಗಳು ರೂಪುಗೊಂಡಿವೆ. ಆದರೆ ಈ ಯೋಜನೆಗಳ ಫಲಿತಾಂಶ ಪಡೆದುಕೊಳ್ಳಲು ಒಂದು ಅತಿ ಮುಖ್ಯವಾದ ಹಂತವಿದೆ – ಅದು ನಿಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಸಂಬಂಧಿಸಿದ ‘ಬೆಳೆ ಸಮೀಕ್ಷೆ’ (Crop Survey).
ಈ ಲೇಖನದ ಮೂಲಕ ನಾವು ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ, ಕ್ರಮ ಹಾಗೂ ಅಪ್ಲಿಕೇಶನ್ ಬಳಕೆ ಕುರಿತು ವಿವರಿಸುತ್ತಿದ್ದೇವೆ. ಇದು ಪ್ರತಿಯೊಬ್ಬ ರೈತನು ತಿಳಿದುಕೊಳ್ಳಲೇಬೇಕಾದ ಮಾಹಿತಿಯಾಗಿದೆ.
ಬೆಳೆ ಸಮೀಕ್ಷೆ ಮಾಡದಿದ್ದರೆ ಏನೆಲ್ಲಾ ನಷ್ಟವಾಗಬಹುದು?
- ಬೆಳೆ ವಿಮೆ (Bele Vime) ಹಣ ಲಭ್ಯವಲ್ಲ
- ಬೆಂಬಲ ಬೆಲೆಯಲ್ಲಿ ಉತ್ಪನ್ನ ಮಾರಾಟ ಮಾಡಲು ಸಾಧ್ಯವಿಲ್ಲ
- ನೈಸರ್ಗಿಕ ವಿಪತ್ತಿಗೆ ಪರಿಹಾರ (NDRF) ಸಿಗದು
- ಕೃಷಿ ಇಲಾಖೆ ಸಬ್ಸಿಡಿ ಯೋಜನೆಗಳಲ್ಲಿ ಅರ್ಹತೆ ತಪ್ಪುಡುತ್ತದೆ
ಈ ಎಲ್ಲಾ ಯೋಜನೆಗಳಿಗೆ ಪಹಣಿಯಲ್ಲಿ (RTC) ನಿಮ್ಮ ಜಮೀನಿನ ಸರ್ವೆ ನಂಬರಿನಡಿ ಬೆಳೆ ವಿವರ ದಾಖಲಾಗಿರುವುದು ಕಡ್ಡಾಯವಾಗಿದೆ.
ರೈತರಿಗೆ ಸಿಕ್ಕಿರುವ ಹೊಸ ಅವಕಾಶ – ಸ್ವತಃ ಬೆಳೆ ಸಮೀಕ್ಷೆ ಮಾಡಿ!
ಕೃಷಿ ಇಲಾಖೆ ಬಿಡುಗಡೆ ಮಾಡಿದ “Kharif Farmer Crop Survey App-2025” ಮೂಲಕ ರೈತರು ತಮ್ಮ ಜಮೀನಿನ ಬೆಳೆಗೆ ಸಂಬಂಧಿಸಿದ ಸಮೀಕ್ಷೆಯನ್ನು ಮನೆಯಲ್ಲಿಯೇ ಮಾಡಬಹುದು.
ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಹಂತಗಳು
ಹಂತ 1: ಅಪ್ಲಿಕೇಶನ್ ಡೌನ್‌ಲೋಡ್
- ಗೂಗಲ್ ಪ್ಲೇಸ್ಟೋರ್‌ನಲ್ಲಿ Kharif Farmer Crop Survey App ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಿ.
- ಡೌನ್‌ಲೋಡ್ ಲಿಂಕ್: Play Store – Kharif Survey App
ಹಂತ 2: ಆಧಾರ್ ದೃಢೀಕರಣ
- App open ಮಾಡಿದ ನಂತರ “Agree” ಕ್ಲಿಕ್ ಮಾಡಿ.
- “E-KYC” ಆಯ್ಕೆಮಾಡಿ ಆಧಾರ್ ನಂಬರ್ ಹಾಕಿ OTP ಮೂಲಕ ದೃಢೀಕರಿಸಿ.
ಹಂತ 3: ಜಮೀನಿನ ಸರ್ವೆ ನಂಬರ್ ಆಯ್ಕೆ
- ನಿಮ್ಮ ಖಾತೆಯಲ್ಲಿರುವ ಸರ್ವೆ ನಂಬರ್ ಗಳು ತೋರಿಸುತ್ತವೆ.
- ಪ್ರತಿಯೊಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಕ್ಲಿಕ್ ಮಾಡಿ.
ಹಂತ 4: ಬೆಳೆ ಮಾಹಿತಿ ನಮೂದಿಸಿ
- ನೀವು ಬೆಳೆದಿರುವ ಬೆಳೆಯ ಆಯ್ಕೆ ಮಾಡಿ.
- ಆ ಬೆಳೆಗೆ ಸಂಬಂಧಿಸಿದ GPS ಫೋಟೋ ಎರಡು ತಗೊಳ್ಳಿ.
- ನಂತರ “Upload“ ಆಯ್ಕೆಯ ಮೂಲಕ ಎಲ್ಲಾ ವಿವರಗಳನ್ನು ಅಪ್‌ಲೋಡ್ ಮಾಡಿ.
ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ
- ಬೆಂಬಲ ಬೆಲೆ ಯೋಜನೆಗೆ ಅರ್ಹರಾಗಲು
- ಬೆಳೆ ವಿಮೆ ಪರಿಹಾರ ಪಡೆಯಲು
- ಅತಿವೃಷ್ಟಿ/ಅನಾವೃಷ್ಟಿಯಿಂದ ನಷ್ಟವಾದಾಗ ಪರಿಹಾರ ಸಿಗಲು
- ಸಬ್ಸಿಡಿ ಯಂತ್ರೋಪಕರಣ, ಥ್ರೇಷರ್, ಬೀಜ, ರಾಸಾಯನಿಕ ಗೊಬ್ಬರ ಯೋಜನೆಗೆ ಅರ್ಹರಾಗಲು
ಈ ಎಲ್ಲಾ ಯೋಜನೆಗಳ ಕೆಂದ್ರೀಯ ಅಂಶವೇ ಬೆಳೆ ಸಮೀಕ್ಷೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳೆ ಸಮೀಕ್ಷೆ ಮಾಡದೆ ಬಿಡಬೇಡಿ.
ಸಹಾಯವಾಣಿ ಮಾಹಿತಿ
- ಹೆಲ್ಪ್‌ಲೈನ್ ನಂಬರ್: 1800 425 3553
- ಅಧಿಕೃತ ವೆಬ್‌ಸೈಟ್: Crop Survey Portal
ಪ್ರಿಯ ರೈತ ಬಂಧುಗಳೇ, ನಿಮ್ಮ ಶ್ರಮದ ಫಲವಾಗಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಈ ತಾಂತ್ರಿಕ ಹಂತಗಳನ್ನು ಅನುಸರಿಸುವುದು ಅತಿ ಮುಖ್ಯ. ಬೆಳೆ ಸಮೀಕ್ಷೆ – ಇದು ನಾಳೆಯ ಸಹಾಯಧನದ ಬೀಗದ ಕೀಲಿ. ನಿಮ್ಮ ಹಕ್ಕು ನಿಮಗೆ ಸಿಗಲೆಂದು, ಇಂದು ಈ ಕೆಲಸ ತಪ್ಪದೇ ಮಾಡಿ!