Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ!

Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ!

ರಾಜ್ಯ ಸರ್ಕಾರದಿಂದ ರೈತರಿಗಾಗಿ ಅನೇಕ ಸಬ್ಸಿಡಿ ಆಧಾರಿತ ಯೋಜನೆಗಳು ರೂಪುಗೊಂಡಿವೆ. ಆದರೆ ಈ ಯೋಜನೆಗಳ ಫಲಿತಾಂಶ ಪಡೆದುಕೊಳ್ಳಲು ಒಂದು ಅತಿ ಮುಖ್ಯವಾದ ಹಂತವಿದೆ – ಅದು ನಿಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಸಂಬಂಧಿಸಿದ ಬೆಳೆ ಸಮೀಕ್ಷೆ’ (Crop Survey).

WhatsApp Float Button

Crop Survey Update

ಈ ಲೇಖನದ ಮೂಲಕ ನಾವು ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ, ಕ್ರಮ ಹಾಗೂ ಅಪ್ಲಿಕೇಶನ್ ಬಳಕೆ ಕುರಿತು ವಿವರಿಸುತ್ತಿದ್ದೇವೆ. ಇದು ಪ್ರತಿಯೊಬ್ಬ ರೈತನು ತಿಳಿದುಕೊಳ್ಳಲೇಬೇಕಾದ ಮಾಹಿತಿಯಾಗಿದೆ.

ಬೆಳೆ ಸಮೀಕ್ಷೆ ಮಾಡದಿದ್ದರೆ ಏನೆಲ್ಲಾ ನಷ್ಟವಾಗಬಹುದು?

  1. ಬೆಳೆ ವಿಮೆ (Bele Vime) ಹಣ ಲಭ್ಯವಲ್ಲ
  2. ಬೆಂಬಲ ಬೆಲೆಯಲ್ಲಿ ಉತ್ಪನ್ನ ಮಾರಾಟ ಮಾಡಲು ಸಾಧ್ಯವಿಲ್ಲ
  3. ನೈಸರ್ಗಿಕ ವಿಪತ್ತಿಗೆ ಪರಿಹಾರ (NDRF) ಸಿಗದು
  4. ಕೃಷಿ ಇಲಾಖೆ ಸಬ್ಸಿಡಿ ಯೋಜನೆಗಳಲ್ಲಿ ಅರ್ಹತೆ ತಪ್ಪುಡುತ್ತದೆ

ಈ ಎಲ್ಲಾ ಯೋಜನೆಗಳಿಗೆ ಪಹಣಿಯಲ್ಲಿ (RTC) ನಿಮ್ಮ ಜಮೀನಿನ ಸರ್ವೆ ನಂಬರಿನಡಿ ಬೆಳೆ ವಿವರ ದಾಖಲಾಗಿರುವುದು ಕಡ್ಡಾಯವಾಗಿದೆ.

ರೈತರಿಗೆ ಸಿಕ್ಕಿರುವ ಹೊಸ ಅವಕಾಶ – ಸ್ವತಃ ಬೆಳೆ ಸಮೀಕ್ಷೆ ಮಾಡಿ!

ಕೃಷಿ ಇಲಾಖೆ ಬಿಡುಗಡೆ ಮಾಡಿದ “Kharif Farmer Crop Survey App-2025” ಮೂಲಕ ರೈತರು ತಮ್ಮ ಜಮೀನಿನ ಬೆಳೆಗೆ ಸಂಬಂಧಿಸಿದ ಸಮೀಕ್ಷೆಯನ್ನು ಮನೆಯಲ್ಲಿಯೇ ಮಾಡಬಹುದು.

ಅಪ್ಲಿಕೇಶನ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಹಂತಗಳು

 ಹಂತ 1: ಅಪ್ಲಿಕೇಶನ್ ಡೌನ್‌ಲೋಡ್

  • ಗೂಗಲ್ ಪ್ಲೇಸ್ಟೋರ್‌ನಲ್ಲಿ Kharif Farmer Crop Survey App ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಿ.
  • ಡೌನ್‌ಲೋಡ್ ಲಿಂಕ್: Play Store – Kharif Survey App

 ಹಂತ 2: ಆಧಾರ್ ದೃಢೀಕರಣ

  • App open ಮಾಡಿದ ನಂತರ “Agree” ಕ್ಲಿಕ್ ಮಾಡಿ.
  • “E-KYC” ಆಯ್ಕೆಮಾಡಿ ಆಧಾರ್ ನಂಬರ್ ಹಾಕಿ OTP ಮೂಲಕ ದೃಢೀಕರಿಸಿ.

 ಹಂತ 3: ಜಮೀನಿನ ಸರ್ವೆ ನಂಬರ್ ಆಯ್ಕೆ

  • ನಿಮ್ಮ ಖಾತೆಯಲ್ಲಿರುವ ಸರ್ವೆ ನಂಬರ್ ಗಳು ತೋರಿಸುತ್ತವೆ.
  • ಪ್ರತಿಯೊಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಬೆಳೆ ವಿವರ ದಾಖಲಿಸಿ” ಕ್ಲಿಕ್ ಮಾಡಿ.

 ಹಂತ 4: ಬೆಳೆ ಮಾಹಿತಿ ನಮೂದಿಸಿ

  • ನೀವು ಬೆಳೆದಿರುವ ಬೆಳೆಯ ಆಯ್ಕೆ ಮಾಡಿ.
  • ಆ ಬೆಳೆಗೆ ಸಂಬಂಧಿಸಿದ GPS ಫೋಟೋ ಎರಡು ತಗೊಳ್ಳಿ.
  • ನಂತರ Upload ಆಯ್ಕೆಯ ಮೂಲಕ ಎಲ್ಲಾ ವಿವರಗಳನ್ನು ಅಪ್‌ಲೋಡ್ ಮಾಡಿ.

ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ

  •  ಬೆಂಬಲ ಬೆಲೆ ಯೋಜನೆಗೆ ಅರ್ಹರಾಗಲು
  • ಬೆಳೆ ವಿಮೆ ಪರಿಹಾರ ಪಡೆಯಲು
  • ಅತಿವೃಷ್ಟಿ/ಅನಾವೃಷ್ಟಿಯಿಂದ ನಷ್ಟವಾದಾಗ ಪರಿಹಾರ ಸಿಗಲು
  • ಸಬ್ಸಿಡಿ ಯಂತ್ರೋಪಕರಣ, ಥ್ರೇಷರ್, ಬೀಜ, ರಾಸಾಯನಿಕ ಗೊಬ್ಬರ ಯೋಜನೆಗೆ ಅರ್ಹರಾಗಲು

ಈ ಎಲ್ಲಾ ಯೋಜನೆಗಳ ಕೆಂದ್ರೀಯ ಅಂಶವೇ ಬೆಳೆ ಸಮೀಕ್ಷೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳೆ ಸಮೀಕ್ಷೆ ಮಾಡದೆ ಬಿಡಬೇಡಿ.

ಸಹಾಯವಾಣಿ ಮಾಹಿತಿ

  • ಹೆಲ್ಪ್‌ಲೈನ್ ನಂಬರ್: 1800 425 3553
  • ಅಧಿಕೃತ ವೆಬ್‌ಸೈಟ್: Crop Survey Portal

ಪ್ರಿಯ ರೈತ ಬಂಧುಗಳೇ, ನಿಮ್ಮ ಶ್ರಮದ ಫಲವಾಗಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಈ ತಾಂತ್ರಿಕ ಹಂತಗಳನ್ನು ಅನುಸರಿಸುವುದು ಅತಿ ಮುಖ್ಯ. ಬೆಳೆ ಸಮೀಕ್ಷೆ – ಇದು ನಾಳೆಯ ಸಹಾಯಧನದ ಬೀಗದ ಕೀಲಿ. ನಿಮ್ಮ ಹಕ್ಕು ನಿಮಗೆ ಸಿಗಲೆಂದು, ಇಂದು ಈ ಕೆಲಸ ತಪ್ಪದೇ ಮಾಡಿ!

WhatsApp Group Join Now
Telegram Group Join Now

Leave a Comment