Bele Vime 2024-25: ರಾಜ್ಯ ರೈತರಿಗೆ ಸಂತಸದ ಸುದ್ದಿ! ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ.

Bele Vime 2024-25: ರಾಜ್ಯ ರೈತರಿಗೆ ಸಂತಸದ ಸುದ್ದಿ! ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ.

ರಾಜ್ಯ ರೈತರಿಗೆ ಸಂತಸದ ಸುದ್ದಿ! ಇದೀಗ ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿಯ ಸಹಯೋಗದೊಂದಿಗೆ 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಮಾವು, ದಾಳಿಂಬೆ, ಕಾಳುಮೆಣಸು, ವಿಳ್ಯೆದೆಲೆ ಸೇರಿ ಹಲವು ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

WhatsApp Float Button

Bele Vime 2024-25

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ — ಪ್ರಕೃತಿ ವಿಪತ್ತುಗಳಿಂದಾಗುವ ನಷ್ಟದಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವುದು. ಈ ಹಿನ್ನೆಲೆಯಲ್ಲಿ ಆಸಕ್ತ ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳನ್ನು ವಿಮೆಗೊಳಪಡಿಸಿಕೊಳ್ಳಬಹುದು.

 ಯಾರು ಅರ್ಜಿ ಸಲ್ಲಿಸಬಹುದು?

  • ತಮ್ಮ ಜಮೀನಿನಲ್ಲಿ ಅಡಿಕೆ ಅಥವಾ ಇತರ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು.
  • ಕ್ರಿಷಿ ಇಲಾಖೆ ನೀಡುವ FID (Fruits ID) ಹೊಂದಿರುವವರು ಮಾತ್ರ ಅರ್ಹರು.

ಅರ್ಜಿ ಸಲ್ಲಿಸುವ ವಿಧಾನ

ರೈತರು ಕೆಳಗಿನ ಯಾವುದೇ ಕೇಂದ್ರಗಳಿಗೆ ಭೇಟಿ ನೀಡಬೇಕು ಅಥವಾ ತಮ್ಮ ಮೊಬೈಲ್ ಮೂಲಕವೇ ವಿಮೆ ಪ್ರೀಮಿಯಂ ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

  • ಗ್ರಾಮಒನ್ ಕೇಂದ್ರ
  • ಕರ್ನಾಟಕಒನ್ ಕೇಂದ್ರ
  • CSC ಕೇಂದ್ರಗಳು
  • ನಿಮ್ಮ ಬ್ಯಾಂಕ್ ಶಾಖೆ

ಅಗತ್ಯ ದಾಖಲೆಗಳು

  1. ಆಧಾರ್ ಕಾರ್ಡ್
  2. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರಗಳು
  3. ಜಮೀನಿನ ಪಹಣಿ/ಉತಾರ್/RTC
  4. ವಿಮೆ ಪ್ರೀಮಿಯಂ ಮೊತ್ತ
  5. ಮೊಬೈಲ್ ನಂಬರ್

ವಿಮೆ ಪ್ರೀಮಿಯಂ ಹಾಗೂ ಕೊನೆಯ ದಿನಾಂಕಗಳು (2.5 ಎಕರೆಗೆ)

ಬೆಳೆ ವಿಮೆ ಮೊತ್ತ ಅರ್ಜಿ ಕೊನೆಯ ದಿನಾಂಕ
ಅಡಿಕೆ ₹6,400 30-06-2025
ಕಾಳುಮೆಣಸು ₹2,350 30-06-2025
ದಾಳಿಂಬೆ ₹6,350 30-06-2025
ವಿಳ್ಯೆದೆಲೆ ₹5,850 30-06-2025
ಮಾವು ₹4,000 31-07-2025

FID ಸಂಖ್ಯೆ ಏಕೆ ಅಗತ್ಯ?

  • ಬೆಳೆ ವಿಮೆಗಾಗಿ ನಿಮ್ಮ FID (Fruits ID) ಅಗತ್ಯವಿದೆ.
  • ಈ ಐಡಿಯಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ಹಾಗೂ ವಿಸ್ತೀರ್ಣ ಸರಿಯಾಗಿ ಸೇರ್ಪಡೆಯಾಗಿರಬೇಕು.
  • ತಪ್ಪು ಅಥವಾ ಅಪೂರ್ಣ ಮಾಹಿತಿ ಇದ್ದರೆ ನಿಕಟದ ರೈತ ಸಂಪರ್ಕ ಕೇಂದ್ರದಲ್ಲಿ ಸರಿಪಡಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಮಾರ್ಗದರ್ಶಿ

  1. ಭೇಟಿಕೊಡಿ: samrakshane.karnataka.gov.in
  2. “Year: 2025-26” ಹಾಗೂ “Season: Kharif/ಮುಂಗಾರು” ಆಯ್ಕೆ ಮಾಡಿ, “Go” ಕ್ಲಿಕ್ ಮಾಡಿ.
  3. “Farmers” ವಿಭಾಗದಲ್ಲಿ “View Cut Off Dates” ಕ್ಲಿಕ್ ಮಾಡಿ.
  4. ನಿಮ್ಮ ಜಿಲ್ಲೆಯ ಆಯ್ಕೆಮಾಡಿ — ವಿವಿಧ ಬೆಳೆಗಳ ವಿಮಾ ಮಾಹಿತಿ ಹಾಗೂ ಕೊನೆಯ ದಿನಾಂಕ ಕಾಣಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ (HDFC Ergo Insurance)

97438 55126,  84314 62824, 89716 08962

WhatsApp Group Join Now
Telegram Group Join Now

Leave a Comment